About the Temple
ಶಿಲ್ಪಿ ನೀಲಕಂಠಚಾರಿಗಳು ಕಾಳಿಕಾಂಭದೇವಿಯ ಮೂರ್ತಿಯನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ನಿತ್ಯ ಮಂತ್ರಘೋಷಗಳೊಂದಿಗೆ ಪೂಜಾ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುತ್ತಿದ್ದರು. ತಮ್ಮ ಮನೆಯಲ್ಲಿನ ಜಗನ್ಮಾತೆಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ತಂಡೋಪತಂಡವಾಗಿ ಬಂದು ತಾವು ಪಡುತ್ತಿದ್ದ ಭೂತ, ಪ್ರೇತ, ಪಿಶಾಚಿ ಬಾಧೆಗಳು, ನಾನಾ ರೀತಿಯ ಕಷ್ಟಗಳಿಗೆ ಪರಿಹಾರ ಮಾಡಿಸಿಕೊಂಡು ಮುಕ್ತಿ ಹೊಂದುತ್ತಿದ್ದರು. ಶಿಲ್ಪಿ ನೀಲಕಂಠಚಾರಿಗಳು ತಮ್ಮ ಮನೆಯಲ್ಲಿಯೇ ಅತಿ ಕಠೋರವಾದ ದೇವಿಯ ಜಪ, ತಪ ಸೇರಿದಂತೆ ಅಘೋರ ಪೂಜೆಗಳನ್ನು ಸಹ ಮಾಡುತ್ತಿದ್ದರು.
ಪ್ರತಿ ಅಮಾವಾಸ್ಯೆ ಬಂತೆಂದ್ರೆ ಸಾಕು ಸಾವಿರಾರು ಭಕ್ತರು ತಂಡೋಪತಂಡವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಂದು ಭಕ್ತರ ಸಮಸ್ಯೆಗಳಿಗೆ ದೇವಿಯ ಉತ್ಸವ ಮೂರ್ತಿಯ ಅಪ್ಪಣೆಯ ಉತ್ತರದ ಮೂಲಕ ಪರಿಹಾರ ಕಲ್ಪಿಸುತ್ತಾ ಸಹಸ್ರಾರು ಕುಟುಂಬಗಳ ಬೆಳಕಾಗಿ ತಾಯಿ ಜಗನ್ಮಾತೆ ಕಾಳಿಕಾಂಬದೇವಿ ಕ್ಷೇತ್ರದಲ್ಲಿ ನಿಂತಿದ್ದಾಳೆ.
Our Events