ಶಿಲ್ಪಿ ಚನ್ನವೀರ ಭದ್ರಾಚಾರಿಗಳ ಪರಿಚಯ :
ಶಿಲ್ಪಿ ಚನ್ನವೀರ ಭದ್ರಾಚಾರಿ ಇವರು ಅಂದಿನ ಕಾಲಕ್ಕೇ ಮಹಾನ್ ಪಂಡಿತರಾಗಿದ್ದರು. ದೇವರ ಶಿಲಾ ಮೂರ್ತಿಗಳು, ಉತ್ಸವ ಮೂರ್ತಿಗಳನ್ನು ರೂಪಿಸುವಲ್ಲಿ ಮಹಾನ್ ನಿಪುಣರಾಗಿದ್ದರು. ದೇವರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿ ಮೂರ್ತಿಗಳಿಗೆ ಶಕ್ತಿ ತುಂಬುತ್ತಿದ್ದರು. ಇವರ ಕಾಲಘಟ್ಟದಲ್ಲಿ ಇಡೀ ದೇಶದಾದ್ಯಂತ ಹಲವಾರು ದೇವರ ಮೂರ್ತಿಗಳನ್ನು ರೂಪಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಭೂತ ವೈದ್ಯರಾಗಿ ಅಂದಿನ ದಿನಗಳಲ್ಲಿಯೇ ಖ್ಯಾತಿಯನ್ನು ಪಡೆದಿದ್ದರು. ಇವರು ಕಾಳಿ ಮಾತೆಯ ಉಪಾಸಕರಾಗಿದ್ದು ದೇವಿಯನ್ನು ಒಲಿಸಿಕೊಂಡಿದ್ದರು. ಕಾಳಿಕಾದೇವಿಯ ಆಶೀರ್ವಾದದಿಂದ ಭೂತ ಪ್ರೇತಗಳ ಬಾಧೆಯಿಂದ ಬಳಲುತ್ತಿದ್ದ, ದೇಹದ ಆರೋಗ್ಯ ಸಂಬಂಧಿತ ಕಾಯಿಲೆಗಳಿಂದ ನರಳಾಡುತ್ತಿದ್ದ, ಮಾನಸಿಕ ತೊಳಲಾಟದಿಂದ ಚಿತ್ರಹಿಂಸೆ ಪಡುತ್ತಿದ್ದ ಕಾಯಿಲೆಗಳನ್ನು ಲಕ್ಷಾಂತರ ಮಂದಿಗೆ ವಾಸಿ ಮಾಡಿ ಮನೆಮಾತಾಗಿದ್ದರು.
ಇವರು ಮೋಡಿ ವಿದ್ಯೆಯಲ್ಲಿಯೂ ಸಹ ತುಂಬಾ ಹೆಸರುವಾಸಿಯಾಗಿದ್ದು ಇವರ ಮಂತ್ರಶಕ್ತಿಯಿಂದ ದೆವ್ವಗಳನ್ನು ಕುರಿಗಳನ್ನಾಗಿ ಮಾಡಿ ಬಳೆ ಮಾಡಿ ಕಟ್ಟಿಹಾಕಿದ್ದರು ಎಂದು ಪೂರ್ವಜರು ಹೇಳುತ್ತಾರೆ. ಅಂದಿನ ಕಾಲದಲ್ಲಿ ಇಷ್ಟು ಭಯಾನಕವಾಗಿ ಎದುರಿಗಿದ್ದವರ ಎದೆ ನಡುಗಿಸುವಂತೆ ಮಂತ್ರಶಕ್ತಿಯ ಪ್ರಭಾವ ಪರಿಣಾಮಕಾರಿಯಾಗಿತ್ತಂತೆ.''
ಶಿಲ್ಪಿ ಗಂಗಾಧರಚಾರಿಗಳ ಪರಿಚಯ :
ಶಿಲ್ಪಿ ಗಂಗಾಧರಚಾರಿ ಶಿಲ್ಪಿ ಚನ್ನವೀರ ಭದ್ರಾಚಾರಿಯವರ ಅಳಿಯ. ಇವರೂ ಸಹ ದೇವರ ಶಿಲಾ ಮೂರ್ತಿಗಳು, ಉತ್ಸವ ಮೂರ್ತಿಗಳು, ಬೆಳ್ಳಿ ದೇವರುಗಳ ಕೆಲಸ, ಕಬ್ಬಿಣ ಪೆಟ್ಟಿಗೆಗಳನ್ನೆಲ್ಲಾ ಮಾಡುತ್ತಿದ್ದರಂತೆ. ಇವರೂ ಸಹ ಭಾರೀ ಹೆಸರುವಾಸಿಯಾಗಿದ್ದು ಹಳ್ಳಿಗಳು ಸೇರಿದಂತೆ ದೂರದ ಪ್ರದೇಶಗಳಿಗೆ ಕಾಲುನಡಿಗೆಯಲ್ಲಿಯೇ ಹೋಗಿ ಭಿನ್ನವಾದ ದೇವರ ಮೂರ್ತಿಗಳನ್ನು ಸರಿಪಡಿಸಿ, ಆ ಮೂರ್ತಿಗಳಿಗೆ ಪ್ರಾಣಪ್ರತಿಷ್ಠೆ ಮಾಡಿ ಬರುತ್ತಿದ್ದರಂತೆ. ಇದರಿಂದಲೇ ಅವರು ಸಾಕಷ್ಟು ಜನಮನ್ನಣೆಯನ್ನೂ ಸಹ ಪಡೆದಿದ್ದರು. ಇನ್ನೂ ಇವರ ಶಿಲ್ಪ ಕಲೆಗೆ ಸಂಬಂಧಪಟ್ಟಂತೆ ಅಂದಿನ ದಿನಗಳಲ್ಲಿ ಇದ್ದ ಚಿಕ್ಕಬಳ್ಳಾಪುರದಲ್ಲಿ ಶಿಲ್ಪ ಕಲೆ ಅಂಗಡಿಯು ಇಂದಿಗೂ ಸಹ ಇದೆ.
ಇವರಿಗೆ ಏಳು ಮಂದಿ ಮಕ್ಕಳಿದ್ದು ಅವರಲ್ಲಿ ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳಾಗಿದ್ದರು. ದೊಡ್ಡ ಮಗ ಶಿಲ್ಪಿ ಭದ್ರಾಚಾರಿ, ಎರಡನೇ ಮಗ ಹನುಮಂತ ಚಾರಿ, ಮೂರನೇ ಮಗ ನೀಲಕಂಠಚಾರಿ, ನಾಲ್ಕನೇ ಮಗ ರಾಮಕೃಷ್ಣಚಾರಿ, ಐದನೇ ಮಗಳು ಕಾವೇರಮ್ಮ, ಆರನೇ ಮಗಳು ಪುಟ್ಟ ಮಾಳಿಗಮ್ಮ, ಕಿರಿಯ ಮಗ ಶಿಲ್ಪಿ ಕೃಷ್ಣಾಚಾರಿ ನಾಮಾಂಕಿತರಾಗಿದ್ದಾರೆ. ಶಿಲ್ಪಿ ಗಂಗಾಧರಚಾರಿಯವರ ಗಂಡು ಮಕ್ಕಳೆಲ್ಲಾ ತಮ್ಮ ಕುಲವೃತ್ತಿಯಾದ ಶಿಲ್ಪಿ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾರೆ.
ಶಿಲ್ಪಿ ನೀಲಕಂಠಚಾರಿ :
ಶಿಲ್ಪಿ ಗಂಗಾಧರಚಾರಿಯವರ ಏಳು ಮಕ್ಕಳಲ್ಲಿ ಮೂರನೇ ಮಗ ಶಿಲ್ಪಿ ನೀಲಕಂಠಚಾರಿ ಬಹಳ ಚುರುಕಾಗಿದ್ದು ವಿದ್ಯೆ ಕಲಿಯಲು ಬಹಳ ಆಸಕ್ತಿಹೊಂದಿದ್ದರು. ಅದನ್ನು ಕಂಡು ಶಿಲ್ಪಿ ನೀಲಕಂಠಚಾರಿಗಳ ತಾತ ಚನ್ನವೀರ ಭದ್ರಾಚಾರಿಗಳು ತಾವು ಕಲಿತಿದ್ದ ಸಕಲ ವಿದ್ಯೆಗಳನ್ನೂ ಸಹ ಧಾರೆಯೆರೆದಿದ್ದರು. ಶಿಲ್ಪಿ ನೀಲಕಂಠಚಾರಿಗಳೂ ಸಹ ಬಹಳ ಶ್ರದ್ಧಾ ಭಕ್ತಿಯಿಂದ ಕಠಿಣ ಶ್ರಮವಹಿಸಿ ತಾತ ಕಲಿಸಿದ ವಿದ್ಯೆಯನ್ನು ನಿಷ್ಠೆಯಿಂದ ಶಿಲ್ಪಿ ವಿದ್ಯೆ ಸೇರಿದಂತೆ ಎಲ್ಲಾ ವಿದ್ಯೆಗಳನ್ನು ಕಲಿತಿದ್ದರು. ಅವರು ಕಲಿತ ವಿದ್ಯೆ ಅಷ್ಟು ಸುಲಭವಾಗಿರಲಿಲ್ಲ. ಬೆಟ್ಟ ಗುಡ್ಡಗಳಲ್ಲಿ, ನದಿ ಸರೋವರಗಳನ್ನೂ ಲೆಕ್ಕಿಸದೆ ಆಹಾರವನ್ನು ತ್ಯಜಿಸಿ ಕಠೋರವಾದ ಜಪ ಮಾಡಿ ಶಕ್ತಿಯುತ ಪೂಜೆಗಳ ಮೂಲಕ ತಾತ ಶಿಲ್ಪಿ ಚನ್ನವೀರ ಭದ್ರಾಚಾರಿಗಳಂತೆ ಜಗನ್ಮಾತೆ ಕಾಳಿಕಾಂಭದೇವಿಯನ್ನು ಒಲಿಸಿಕೊಂಡಿದ್ದರು.
ಶಿಲ್ಪಿ ನೀಲಕಂಠಚಾರಿಗಳು ಕಾಳಿಕಾಂಭದೇವಿಯ ಮೂರ್ತಿಯನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ನಿತ್ಯ ಮಂತ್ರಘೋಷಗಳೊಂದಿಗೆ ಪೂಜಾ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುತ್ತಿದ್ದರು. ತಮ್ಮ ಮನೆಯಲ್ಲಿನ ಜಗನ್ಮಾತೆಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ತಂಡೋಪತಂಡವಾಗಿ ಬಂದು ತಾವು ಪಡುತ್ತಿದ್ದ ಭೂತ, ಪ್ರೇತ, ಪಿಶಾಚಿ ಬಾಧೆಗಳು, ನಾನಾ ರೀತಿಯ ಕಷ್ಟಗಳಿಗೆ ಪರಿಹಾರ ಮಾಡಿಸಿಕೊಂಡು ಮುಕ್ತಿ ಹೊಂದುತ್ತಿದ್ದರು. ಶಿಲ್ಪಿ ನೀಲಕಂಠಚಾರಿಗಳು ತಮ್ಮ ಮನೆಯಲ್ಲಿಯೇ ಅತಿ ಕಠೋರವಾದ ದೇವಿಯ ಜಪ, ತಪ ಸೇರಿದಂತೆ ಅಘೋರ ಪೂಜೆಗಳನ್ನು ಸಹ ಮಾಡುತ್ತಿದ್ದರು.
ಕಾಲ ಕಳೆದಂತೆ ಅದೊಂದು ದಿನ ಶಿಲ್ಪಿ ನೀಲಕಂಠಚಾರಿಗಳು ಮಲಗಿರುವ ಸಮಯದಲ್ಲಿ ತಾಯಿ ಜಗನ್ಮಾತೆ ಶ್ರೀ ಕಾಳಿಕಾಂಭದೇವಿ ಸ್ವಪ್ನದಲ್ಲಿ ಬಂದು ಒಂದು ಕುಂಟೆ, ಎರಡು ಆಲದ ಮರದ ಮಧ್ಯೆಯಲ್ಲಿ ನಿಂತು ನಾನು ಇಲ್ಲಿ ನೆಲೆಸುತ್ತೇನೆ. ಇದೇ ಸ್ಥಳದಲ್ಲಿ ನನ್ನನ್ನು ಪ್ರತಿಷ್ಠಾಪಿಸು ಎಂದು ಆಶೀರ್ವಾದ ಮಾಡಿ ಅಪ್ಪಣೆ ಕೊಟ್ಟಳು. ನಿದ್ದೆಯಿಂದ ಎಚ್ಚರಗೊಂಡ ಶಿಲ್ಪಿ ನೀಲಂಕಂಠಚಾರಿಗಳು ತಡಮಾಡದೆ ತಾಯಿ ಜಗನ್ಮಾತೆ ತೋರಿಸಿದ ಸ್ಥಳದಲ್ಲಿಯೇ ತಾವೇ ಸ್ವತಃ ದೇಗುಲವನ್ನು ನಿರ್ಮಿಸಿ ಕಾಳಿಕಾಂಭದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದಲೂ ಸಹ ದೇವಿಗೆ ಪೂಜಾಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಸುತ್ತಮುತ್ತಲ ಪ್ರದೇಶಗಳಿಂದ ತಂಡೋಪ ತಂಡವಾಗಿ ಸಾವಿರಾರು ಮಂದಿ ಭಕ್ತರು ತಾಯಿಯ ಸನ್ನಿಧಾನಕ್ಕೆ ಬಂದು ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ದೇಗುಲಕ್ಕೆ ಬಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೇವಿಯು ನಿವಾರಿಸುತ್ತಾ ಬರುತ್ತಿದ್ದಾಳೆ. ಇನ್ನೂ ಶಿಲ್ಪಿ ನೀಲಕಂಠಚಾರಿಗಳು ಬಂದ ಭಕ್ತರನ್ನು ಪೀಡಿಸುತ್ತಿದ್ದ ಭೂತ ಪ್ರೇತಗಳನ್ನು ಬಿಡಿಸುವುದು, ದೈಹಿಕ, ಮಾನಸಿಕ ಕಾಯಿಲೆಗಳಿಂದ ದೂರ ಮಾಡುವುದು, ಕಂಕಣ ಭಾಗ್ಯ, ಶತ್ರು ಕಾಟ, ಚರ್ಮವ್ಯಾದಿಗಳ ಸಮಸ್ಯೆ ಹೀಗೆ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುತ್ತಾ ಸಾವಿರಾರು ಮಂದಿಗೆ ತಾವು ಕಲಿತ ವಿದ್ಯೆಯಿಂದ ಒಳಿತನ್ನು ಮಾಡಿ ಭಕ್ತರ ಮೊಗದಲ್ಲಿ ಸಂತೋಷವನ್ನು ಕಾಣುತ್ತಿದ್ದರು.
ನೀಲಕಂಠಚಾರಿಗಳು ಸಾವಿರಾರು ದೇವರುಗಳ ಮೂರ್ತಿಗಳನ್ನು, ಉತ್ಸವಮೂರ್ತಿಗಳನ್ನು ಸಿದ್ದಪಡಿಸಿ ಇದೇ ಸ್ಥಳದಲ್ಲಿಯೇ ಪ್ರಾಣಪ್ರತಿಷ್ಟೆ ಹಾಗೂ ದೃಷ್ಠಿ ಕೊಟ್ಟು ಕಳುಹಿಸುತ್ತಿದ್ದರು. ಈಗಲೂ ಸಹ ಶಿಲ್ಪಿ ನೀಲಕಂಠಚಾರಿಗಳ ಹಸ್ತಗಳಿಂದ ರೂಪುಗೊಂಡಿರುವ ಸಾಕಷ್ಟು ದೇವರ ಮೂರ್ತಿಗಳು ಅತಿ ಹೆಚ್ಚು ಪ್ರಭಾವಯುತವಾದ ಶಕ್ತಿಯಿಂದ ಪುಣ್ಯಕ್ಷೇತ್ರಗಳಾಗಿ ಹೆಸರು ಪಡೆದಿವೆ. ``ಅದಕ್ಕೊಂದು ನಿದರ್ಶನ ಎಂದರೆ ತುಮಕೂರು ಜಿಲ್ಲೆಯ ಮದುಗಿರಿ ತಾಲೂಕಿನ ಗುಟ್ಟಕೊಡಗೇನಹಳ್ಳಿ ಹೋಬಳಿ ಸಿಂಗನಹಳ್ಳಿ ಗ್ರಾಮಕ್ಕೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಉತ್ಸವ ಮೂರ್ತಿಯನ್ನು ಶಿಲ್ಪಿ ನೀಲಕಂಠಚಾರಿಗಳು ಅಮ್ಮನವರ ಕ್ಷೇತ್ರದಲ್ಲಿಯೇ ಸಿದ್ದಪಡಿಸಿ ಶಕ್ತಿ ಕೊಟ್ಟು ದೃಷ್ಠಿ ಕೊಡುವ ಸಮಯದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಬಲಗಡೆ ಕಣ್ಣಿನಲ್ಲಿ ದೇದಿಪ್ಯಮಾನವಾದ ಜ್ಯೋತಿ ರೂಪದ ಬೆಂಕಿ ಕಾಣಿಸಿಕೊಂಡಿತ್ತು. ಈ ಪವಾಡಕ್ಕೆ ಸ್ಥಳದಲ್ಲಿದ್ದ ಊರಿನ ಮುಖಂಡರು, ಗ್ರಾಮಸ್ಥರು ಒಂದು ಕ್ಷಣ ದಂಗಾಗಿ ಹೋಗಿದ್ದರು. ಅಂದು ನಡೆದಿದ್ದ ಪವಾಡವನ್ನು ಗ್ರಾಮದ ಹಿರಿಯರು ಇಂದಿಗೂ ಸಹ ಸ್ಮರಿಸುತ್ತಿರುವುದು ಗಮನಾರ್ಹ.
ಶಿಲ್ಪಿ ನೀಲಕಂಠಚಾರಿಗಳಿಗೆ ಮೂರು ಜನ ಗಂಡು ಮಕ್ಕಳು. ಮೊದಲ ಮಗ ಶಿಲ್ಪಿ ಮಂಜುನಾಥಚಾರಿ, ಎರಡನೇ ಮಗ ಶಿಲ್ಪಿ ಕಾಳಿಂಗಚಾರಿ ಮತ್ತು ಮೂರನೇ ಮಗ ಶಿಲ್ಪಿ ಸುಬ್ರಹ್ಮಣ್ಯಚಾರಿ. ಈ ಮೂವರೂ ಸಹ ಶಿಲ್ಪಿ ನೀಲಕಂಠಚಾರಿಗಳ ಬಳಿ ಸಕಲ ವಿದ್ಯೆಗಳನ್ನು ಕಲಿತು ದೇವರ ಮೂರ್ತಿಗಳು, ಉತ್ಸವ ಮೂರ್ತಿಗಳನ್ನು ಸಿದ್ದಪಡಿಸಿ ಆ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠೆ ಮಾಡಿ ಶಕ್ತಿ ತುಂಬುವ ಕೆಲವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರೂ ಸಹ ತಮ್ಮ ತಂದೆಯ ಭೂತವಿದ್ಯೆಯ ಜೊತೆ ಎಲ್ಲಾ ರೀತಿಯ ಶಕ್ತಿ ವಿದ್ಯೆಗಳನ್ನು ಬಹಳಷ್ಟು ಶ್ರಮ ಪಟ್ಟು ನಿಷ್ಠೆಯಿಂದ ಕಲಿತು, ಆ ವಿದ್ಯೆಯ ಮೂಲಕ ಜನರ ಕಷ್ಟಕಾರ್ಪಣ್ಯಗಳನ್ನು ನೀಗಿಸುತ್ತಾ ಬರುತ್ತಿದ್ದಾರೆ. ತಾಯಿ ಜಗನ್ಮಾತೆ ಕಾಳಿಕಾಂಭ ದೇವಿಯ ಸನ್ನಿಧಾನಕ್ಕೆ ಬರುವ ಭಕ್ತರ ಸಮಸ್ಯೆಗಳಾದ ಭೂತ ಪ್ರೇತಗಳಗಳನ್ನು ತೊಲಗಿಸುವುದು, ಮಾನಸಿಕ ಹಿಂಸೆ, ಕಷ್ಟ ಕಾರ್ಪಣ್ಯಗಳನ್ನು ದೇವಿಯ ಅಪ್ಪಣೆಯಂತೆ ದೂರ ಮಾಡುತ್ತಾ ಬರುತ್ತಿದ್ದಾರೆ.
ಪ್ರತಿ ಅಮಾವಾಸ್ಯೆ ಬಂತೆಂದ್ರೆ ಸಾಕು ಸಾವಿರಾರು ಭಕ್ತರು ತಂಡೋಪತಂಡವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಂದು ಭಕ್ತರ ಸಮಸ್ಯೆಗಳಿಗೆ ದೇವಿಯ ಉತ್ಸವ ಮೂರ್ತಿಯ ಅಪ್ಪಣೆಯ ಉತ್ತರದ ಮೂಲಕ ಪರಿಹಾರ ಕಲ್ಪಿಸುತ್ತಾ ಸಹಸ್ರಾರು ಕುಟುಂಬಗಳ ಬೆಳಕಾಗಿ ತಾಯಿ ಜಗನ್ಮಾತೆ ಕಾಳಿಕಾಂಬದೇವಿ ಕ್ಷೇತ್ರದಲ್ಲಿ ನಿಂತಿದ್ದಾಳೆ. ಪ್ರತಿ ಅಮವಾಸ್ಯೆಯಂದು ಭೂತ ಪ್ರೇತ ಬಾಧೆಗಳು, ಮಾಟ ಮಂತ್ರದಿಂದ ಸಂಕಷ್ಠದಲ್ಲಿ ಸಿಲುಕಿದ್ದರೆ, ಜನರ ದೃಷ್ಠಿ, ವ್ಯಾಪಾರದಲ್ಲಿ ಅಭಿವೃದ್ಧಿ ಇಲ್ಲದೇ ಇರುವುದು, ಶತ್ರುಕಾಟ, ಕೌಟುಂಬಿಕ ಕಲಹ, ಕಂಕಣ ಭಾಗ್ಯ, ಆಸ್ತಿ ವಿಚಾರ, ದೀರ್ಘ ಕಾಲದ ದೇಹದ ಆರೋಗ್ಯ ಸಮಸ್ಯೆಗಳು, ಸಂತಾನ ಸಮಸ್ಯೆ, ಭೂಮಿ ವಿಚಾರ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಶ್ರೀ ಕಾಳಿಕಾಂಭದೇವಿ, ಚೌಡೇಶ್ವರಿ ದೇವಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಜಗನ್ಮಾತೆಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ತಡೆ ಒಡೆಸಿಕೊಳ್ಳುವುದು, ಹೋಮ ಹವನ ಪೂಜೆಗಳಲ್ಲಿ ಪಾಲ್ಗೊಳ್ಳುವುದು, ಮಕ್ಕಳಿಲ್ಲದವರು ಅಮ್ಮನ ಅಭಿಷೇಕದ ನೀರನ್ನು ಹಾಕಿಸಿಕೊಂಡರೆ ಎಲ್ಲರ ಕಷ್ಟಕಾರ್ಪಣ್ಯಗಳನ್ನು ದೇವಿ ದೂರ ಮಾಡುತ್ತಾಳೆ.
ತಡೆಒಡಿಸಿಕೊಳ್ಳುವುದು ಏಕೆ ?
ಶ್ರೀ ಕ್ಷೇತ್ರ ಶ್ರೀ ಕಾಳಿಕಾಂಭದೇವಿ ಹಾಗೂ ಚೌಡೇಶ್ವರಿ ದೇವಿಯ ಪುಣ್ಯಕ್ಷೇತ್ರದಲ್ಲಿ ಪೂರ್ವಜರ ಕಾಲದ ಬೃಹತ್ ಮರವೊಂದಿದೆ. ಅದೊಂದು ದಿನ ಆ ಮರದ ಕೊಂಬೆಯನ್ನು ಶಿಲ್ಪಿ ನೀಲಕಂಠಚಾರಿಗಳು ಹಾಗೂ ಅವರ ಶಿಷ್ಯರು ಕಡಿದಿದ್ದರು. ಅಂದು ಶಿಲ್ಪಿ ನೀಲಕಂಠಚಾರಿಗಳಿಗೆ ಶಕ್ತಿ ದೇವತೆ ಗೋಚರವಾಗಿ ನಾನು ಈ ಮರದಲ್ಲಿ ಶಕ್ತಿ ರೂಪದಲ್ಲಿ ವಾಸವಾಗಿದ್ದೀನಿ. ಇಲ್ಲಿಯೂ ನನಗೆ ಪೂಜೆ ಕೊಡು. ಸರ್ವರನ್ನೂ ನಾನು ಕಾಯುತ್ತೀನಿ ಎಂದು ಸೂಚಿಸಿ ಅಪ್ಪಣೆಕೊಟ್ಟಳು. ಅಂದಿನಿಂದಲೂ ಸಹ ಈ ಮರದ ಬಳಿಯೇ ಬಂದ ಭಕ್ತರಿಗೆ ತಡೆ ಒಡೆಯುತ್ತಿದ್ದಾರೆ. ತಡೆ ಒಡೆಯುವುದರಿಂದ ಭೂತ, ಪ್ರೇತ ಬಾಧೆಗಳು, ಮಾಟ, ಮಂತ್ರ ಶೂನ್ಯ, ಶತ್ರುಬಾಧೆ, ದೃಷ್ಠಿ, ನಾನಾ ರೀತಿಯ ಜೀವನದ ಸಮಸ್ಯೆಗಳು, ಸಂತಾನ ಭಾಗ್ಯ, ಭೂಮಿ ವಿಚಾರ, ಕಂಕಣ ಭಾಗ್ಯ, ಕೌಟುಂಬಿಕ ಕಲಹ, ಚರ್ಮವ್ಯಾದಿಗಳು, ದೈಹಿಕ, ಮಾನಸಿಕ ಸಮಸ್ಯೆಗಳು ಸೇರಿದಂತೆ ನಾನಾ ರೀತಿಯ ಜನರ ಕಷ್ಟಗಳು ಪರಿಹಾರವಾಗುತ್ತಿವೆ.
ಒಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಪ್ರತಿ ಅಮವಾಸ್ಯೆಗೆ ಶ್ರೀ ಕಾಳಿಕಾಂಭದೇವಿ, ಚೌಡೇಶ್ವರಿದೇವಿ ನಮಗೆ ಒಳಿತನ್ನು ಮಾಡುತ್ತಾರೆ ಎಂಬ ನಂಬಿಕೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಅಂದು ತಾಯಿ ಕಾಳಿಕಾಂಭದೇವಿ, ಚೌಡೇಶ್ವರಿ ದೇವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ಸಕಲ ಕಷ್ಟಗಳನ್ನೂ ಸಹ ದೂರ ಮಾಡುವಂತೆ ತಡೆ ಒಡೆಸಿಕೊಂಡರೆ ಕಷ್ಟಗಳೆಲ್ಲಾ ದೂರವಾಗಿ ಸಾವಿರಾರು ಕುಟುಂಬಗಳು ಇಂದು ಸಂತೋಷದಲ್ಲಿ ಮುಳುಗಿದೆ. ಇನ್ನು ಬದುಕಿನಲ್ಲಿ ಕಷ್ಟಗಳೇ ತುಂಬಿದ್ದು ಅದರಿಂದ ಹೊರ ಬರಲು ಪ್ರಯತ್ನ ಪಡುವ ಭಕ್ತರು ತಮ್ಮ ಮನೆಗಳಲ್ಲಿಯೇ ಅಮ್ಮನವರ ಉತ್ಸವಮೂರ್ತಿಯನ್ನು ಕರೆಸಿ ಹೋಮ ಹವನವನ್ನು ಮಾಡಿಸಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದರೆ ಕಡಿಮೆ ಅವಧಿಯಲ್ಲಿಯೇ ತಮ್ಮ ಕಷ್ಟಗಳಿಂದ ಹೊರಬಂದು ಸಂತಸದಿಂದಿದ್ದಾರೆ.
ಅದೇರೀತಿ ಅಮ್ಮನ ಉತ್ಸವ ಮೂರ್ತಿಯನ್ನು ಸುಮಾರು ಸಾವಿರಾರು ಕಿ.ಮೀ ದೂರದಲ್ಲಿರುವ ಭಕ್ತರ ಮನೆಗಳಿಗೂ ಸಹ ಕರೆಸಿ ತಮ್ಮ ಹರಿಕೆಯನ್ನು ತೀರಿಸಿರುವ ಹಲವಾರು ನಿದರ್ಶನಗಳಿವೆ. ಇದರಿಂದ ಅವರಿಗೆ ಇದ್ದ ಕಷ್ಟಕಾರ್ಪಣ್ಯಗಳೆಲ್ಲಾ ದೂರವಾಗಿ ಭಕ್ತರು ಸಂತೋಷದಿಂದ ಬದುಕನ್ನು ಸಾಗಿಸುತ್ತಿದ್ದಾರೆ.